ಯಾದ್ ವಶೇಮ್ | Yad Vashem

ಯಾದ್ ವಶೇಮ್ | Yad Vashem Best E-Book, ಯಾದ್ ವಶೇಮ್ | Yad VashemBy ನೇಮಿಚ೦ದ್ರ This Is Very Good And Becomes The Main Topic To Read, The Readers Are Very Takjup And Always Take Inspiration From The Contents Of The Book ಯಾದ್ ವಶೇಮ್ | Yad Vashem , Essay By ನೇಮಿಚ೦ದ್ರ. Is Now On Our Website And You Can Download It By Register What Are You Waiting For? Please Read And Make A Refission For You

Is a well-known author, some of his books are a fascination for readers like in the ಯಾದ್ ವಶೇಮ್ | Yad Vashem book, this is one of the most wanted ನೇಮಿಚ೦ದ್ರ author readers around the world.

[Download] ✤ ಯಾದ್ ವಶೇಮ್ | Yad Vashem By ನೇಮಿಚ೦ದ್ರ – Online-strattera-atomoxetine.info
 • Paperback
 • 288 pages
 • ಯಾದ್ ವಶೇಮ್ | Yad Vashem
 • ನೇಮಿಚ೦ದ್ರ
 • Kannada
 • 27 February 2019

10 thoughts on “ಯಾದ್ ವಶೇಮ್ | Yad Vashem

 1. says:

  ಕನ್ನಡದ ಅತಿ ಅಪರೂಪದ ಪುಸ್ತಕವಿದು. ಒಮ್ಮೆ ಓದಿದರೆ ಎಂದಿಗೂ ಮರೆಯಲಾಗದಂತಹ ವಸ್ತು. ಬೆಂಗಳೂರಿನ ಚಾಮರಾಜ ಪೇಟೆಯಿಂದ, ಜರ್ಮನಿ, ಇಸ್ರೇಲ್, ಅಮೆರಿಕ ಎಲ್ಲೆಡೆಯು ಸುತ್ತಿಸಿ, ದೇಶ, ಭಾಷೆ, ಜಾತಿ, ಧರ್ಮ, ಸಂಸ್ಕೃತಿ, ಈ ಎಲ್ಲವನ್ನೂ ಮೀರಿದುದು ಮಾನವತೆ ಎಂದು ಹೇಳುವ ಕಥೆಗಾರ್ತಿ, ಇದರಲ್ಲಿ ತೋರಿರುವ ವಸ್ತುನಿಷ್ಠೆ ಅಷ್ಟಿಷ್ಟಲ್ಲ. ಈ ಕಥೆಯ ಹಿರಿಮೆಯನ್ನು ಹೇಳುವುದು ಅಸಾಧ್ಯ. ಖಂಡಿತ ಓದಲೇ ಬೇಕಾದ ಪುಸ್ತಕ.

 2. says:

  ಸಾಕಷ್ಟು ಅಧ್ಯಯನ ಮತ್ತು ಸುತ್ತಾಟ ನಡೆಸಿ ಬರೆದಿರುವ ಈ ಕಾದಂಬರಿ, ಓದಿದ ಸಾಕಷ್ಟು ದಿನಗಳವರೆಗೆ ಕಾಡದೆ ಇರದು.. ನಿಜಕ್ಕೂ ಒಂದು ಒಳ್ಳೆಯ ಓದು..

 3. says:

  One of the best books I've ever read and the one every human being should read. The author brings out the harsh reality of the second world war in a wonderful way.

 4. says:

  ಇಸ್ರೇಲ್ ನ್ನ ಜಗಳಗಂಟ ದೇಶ ಅಂತಾರೆ.ಸುಮ್ಮನೆ ಕಾಲುಕೆರೆದುಕೊಂಡು ಜಗಳಕ್ಕೆ ನಿಲ್ಲೋ ದೇಶ ಅಂತಲೂ ಕರೆಯೋದುಂಟು.ಆದರೆ ಅದು ಹಾಗಾಗೋಕೆ ಕಾರಣ ಏನು ಅಂತ ತಿಳ್ಕೋಬೇಕಾದ್ರೆ `ನೇಮಿಚಂದ್ರ´ರ `ಯಾದ್ ವಶೇಂ' ಓದಬೇಕು.

   ಹ್ಯಾನಾ, ಅವಳ ಅಪ್ಪ,ಅಮ್ಮ,ಅಕ್ಕ,ತಮ್ಮ  ಹೀಗೆ ಸಂತೋಷದಿಂದ ಕೂಡಿದ್ದ ಯಹೂದಿ ಕುಟುಂಬ ಅದು.ಮೂರು ತಲೆಮಾರುಗಳಿಂದ ಜರ್ಮನಿಯಲ್ಲಿ ನೆಲೆಸಿದ್ದರು ಹ್ಯಾನಾಳ ಪೂರ್ವಿಕರು.ಹ್ಯಾನಾಳ ಅಪ್ಪ ವಿಜ್ಞಾನಿ ಎಲ್ಲ ಮಕ್ಕಳಂತೆ ಆನಂದವಾಗಿ ನೆಮ್ಮದಿಯಿಂದ ಸಾಗಿತ್ತು ಹ್ಯಾನಾಳ ಬದುಕು.
  ಹಿಟ್ಲರ್ ಅಧಿಕಾರಕ್ಕೇರಿದ,ನಾಜಿಗಳ ಪಡೆಯನ್ನ ಕಟ್ಟಿದ.ದುರ್ಬರವಾಗುತ್ತಾ ಸಾಗಿತ್ತು ಯಹೂದಿಗಳ ಜೀವನ.ಎಲ್ಲಂದರಲ್ಲಿ ಸಾವು ನೋವು ಶುರುವಾಗತ್ತೆ.

  ಹ್ಯಾನಾಳ ಕುಟುಂಬ ತನ್ನ ಬೇರನ್ನ ಬಲವಂತವಾಗಿ ಕತ್ತರಿಸಿಕೊಂಡು ಸಾಗಿದ್ದು ಆಮ್ ಸ್ಟರ್ ಡ್ಯಾಮ್ ಗೆ ಅಲ್ಲಿ ಒಂದೆರೆಡು ವರ್ಷಗಳ ನಿರಾತಂಕ ಬದುಕು ಸಾಗತ್ತೆ.ಆದರೆ ಅಲ್ಲೂ ಕಾಲಿಡ್ತಾನೆ ಹಿಟ್ಲರ್ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕ್ತಿದ್ದ ಹ್ಯಾನಾಳ ಕುಟುಂಬಕ್ಕೆ ಒಂದು ರಾತ್ರಿ ಜವರಾಯನ ದರ್ಶನವಾಗತ್ತೆ ನಾಳೆ ಮನೆಯವರೆಲ್ಲ ಕ್ಯಾಂಪಿಗೆ ಬರಬೇಕೆನ್ನೋ ಆದೇಶ.ಉಟ್ಟ ಬಟ್ಟೆಯಲ್ಲೇ ಮನೆ ಬಿಡೋಕೆ ಸಿದ್ದವಾಗ್ತಾರೆ.ಅನುಮಾನ ಬಾರದಿರಲಿ ಅಂತ ಹ್ಯಾನಾ ಅವಳ ಅಪ್ಪ ಮುಂದೆ ಹೋಗಿ ಮರೆಯಲ್ಲಿ ಕಾದಿರ್ತಾರೆ.ಮನೆಯಿಂದ ಹೊರಬಂದ ಹ್ಯಾನಾಳ ಅಮ್ಮ ಅಕ್ಕ ಪುಟ್ಟ ತಮ್ಮನನ್ನ ಅಡ್ಡಗಟ್ಟಿದ್ದು ನಾಜಿಗಳು.ಹ್ಯಾನಾ ನೋಡ್ತಿದ್ದ ಹಾಗೇ ಅವಳ ಅಮ್ಮ ಅಕ್ಕ ತಮ್ಮನನ್ನ ಜೀಪಿನಲ್ಲಿ ತುಂಬಿಕೊಂಡು ಹೋಗ್ತಾರೆ.ನಾಜಿಗಳ ಸಂಪರ್ಕವೇ ಇಲ್ಲದ ಕಡೆಗೆ ಹೋಗಬೇಕು ಅಂತ ಅವಳಪ್ಪ ಹ್ಯಾನಾಳನ್ನ ಕರೆತಂದದ್ದು ಭಾರತಕ್ಕೆ.

  ತಾಯಿಯನ್ನ ತಾಯ್ನಾಡನ್ನ ಬಿಟ್ಟುಬಂದ ಹ್ಯಾನಾಳಿಗೆ  ನೆರೆಮನೆಯವರಾಗಿ ದೊರೆತದ್ದು ವಿವೇಕ್ ಕುಟುಂಬ.ವಿವೇಕ್ ಅಮ್ಮನಂತೂ ನನ್ನ ಇಷ್ಟು ಮಕ್ಕಳ ಜೊತೆ ಇದೂ ನನ್ನ ಮಗುವೇ ಅಂತ ಭಾವಿಸೋ 'ಅಮ್ಮ'.ಹೊಸ ಜಾಗಕ್ಕೆ ಹೊಂದಿಕೊಳ್ತಾ ಯುದ್ದ ಮುಗಿದ ಕೂಡಲೇ ಅಮ್ಮನನ್ನ ಹುಡುಕಿ ಹೋಗೋ ನಿರೀಕ್ಷಿಸಯಲ್ಲಿದ್ದವಳಿಗೆ ಅಪ್ಪನ ಸಾವು ದೊಡ್ಡ ಆಘಾತ.ವಿವೇಕ್ ಅಮ್ಮ ಮಗಳಂತೆಯೇ ಹ್ಯಾನಾಳನ್ನ ಸಾಕ್ತಾರೆ ವಿವೇಕ್ ಜೊತೆ ಮದುವೆಯೂ ಆಗತ್ತೆ.ಹ್ಯಾನಾ ಅನಿತಾ ಆಗ್ತಾಳೆ.

  ಆದರೆ ಅವಳ ಬೇರಿನ ಸೆಳೆತ ಪ್ರತಿನಿತ್ಯ ಅವಳನ್ನ ಕಾಡತ್ತೆ.ಅಮ್ಮ ಅಕ್ಕನ ಯೋಚನೆ ಅವರೇನಾದ್ರು ಅಂತ ತಿಳಿದುಕೊಳ್ಳೋ ತವಕ.ಮಗ ದೊಡ್ಡವನಾಗಿ ವಿದೇಶಕ್ಕೆ ಹೋಗೋ ಆರ್ಥಿಕ ಶಕ್ತಿ ಕೂಡಿದಾಗ ವಿವೇಕ್ ಅನಿತಾ ಮೊದಲು ಹೋಗಿದ್ದು ತನ್ನವರನ್ನ ಇರಿಸಿದ್ದ ಡಕಾವ್ ಕ್ಯಾಂಪ್ಗೆ. ಅಲ್ಲಿ ಯಾವ ಸುಳಿವೂ ಸಿಗದೆ ನಂತರ ನಡೆದಿದ್ದು ಅಮೇರಿಕಾ ಕೊನೆಗೆ ಇಸ್ರೇಲ್.ಅನಿತಾಳ ಅಮ್ಮ ತಮ್ಮ ಹುತಾತ್ಮರಾದದ್ದು ತಿಳಿಯತ್ತೆ.ಅಕ್ಕ ಸಿಕ್ಕು ತನ್ನ ಭೀಕರ ಕತೆಯನ್ನ ಹೇಳ್ತಾಳೆ.

  ನಾಜಿಗಳು ನಡೆಸಿದ ಕ್ರೌರ್ಯವನ್ನ ಓದ್ತಿದ್ರೆ ಮೈ ಮರಗಟ್ಟತ್ತೆ.ಮನುಷ್ಯ ಮತ್ತೊಬ್ಬ ಮನುಷ್ಯನೆಡೆಗೆ ಅದ್ಹೇಗೆ ಅಷ್ಟು ಕ್ರೂರತೆಯಿಂದ ನಡೆದುಕೊಳ್ಳಬಲ್ಲ ಅಂತ ಬೆಚ್ಚುವ ಹಾಗಾಗತ್ತೆ. ಗ್ಯಾಸ್ ಛೇಂಬರ್ಗಳು,ನಿರಂತರವಾಗಿ ಉರಿಯುತ್ತಲೇ ಚಿತಾಗಾರ,ವೈದ್ಯಕೀಯ ಪ್ರಯೋಗಗಳಿಗೆ ಬಲಿಯಾಗುತ್ತಿದ್ದ ಅಮಾಯಕರು,ಪ್ರತಿದಿನ ತುಂಡುಬ್ರೆಡ್ಡಿನ ಊಟ,ಅತ್ಯಾಚಾರ ಮಾನವನ ಕ್ರೂರತೆಯ ಪರಾಕಾಷ್ಟೆ ಈ ಕ್ಯಾಂಪ್ ಗಳು.ಎಷ್ಟೋ ಕಡೆ ಇನ್ನು ಓದಲಾರೆ ಅನ್ನಿಸಿ ಕೆಳಗಿಟ್ಟರೂ ಮತ್ತೆ ಒದೋಕೆ ಶುರು ಮಾಡಿ ಕಣ್ಣಂಚಲ್ಲಿ ನೀರು ತರಿಸಿದ ಪುಸ್ತಕ.

 5. says:

  ಹಿಟ್ಲರ್ ನ ನಾಜ಼ಿ ಪಡೆ ಯಹೂದೀ ಗಳ ಮೇಲೆ ನಡೆಸಿದ ಅಮಾನವೀಯ, ರಾಕ್ಷಸಿ ಕೃತ್ಯ ತಿಳಿಯಬೇಕಿದಲ್ಲಿ ನಿಮಿಗಿದೋ ನೇಮಿಚಂದ್ರ ರ "ಯಾದ್ ವಶೇಮ್" .
  ಯಾವುದೋ ಓಬೀರಾಯನ ಪೂರಾಣದಲ್ಲಿ ನಡೆದ ಆರ್ಯ ಅನಾರ್ಯ ರ ಕದನವನ್ನು ಇಪ್ಪತ್ತನೇ ಶತಮಾನದಲ್ಲಿ ಯಹೂದೀಗಳನ್ನು ಗುರಿ ಮಾಡಿದ ನಾಜ಼ಿಗಳ ಅಟ್ಟಹಾಸ ಓದಿದರೆ ಕರುಳು ಚುರ್ ಎನ್ನದೆ ಇರಲಾರದು.
  ಲೇಖಕಿ ನೇಮಿಚಂದ್ರರ ಈ ಕಾದಂಬರಿ ಬಹಳ ಇಷ್ಟವಾಗುವುದು ಅವರ ನವಿರಾದ ನಿರೂಪಣೆ, ಹಳ್ಳಿ ಸೊಗಡಿನ ಸಂಭಾಷಣೆ, ಪೂರ್ವ ಪಶ್ಚಿಮ ಪಾತ್ರಗಳ ಹಾಗೂ ಎರಡು ಸಂಸ್ಕೃತಿಯಲ್ಲಿನ ವ್ಯತಾಸಗಳನ್ನ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ನಮ್ಮ ಬೆಂಗಳೂರು ಹೇಗಿತ್ತು ಅಂತ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ, ಈ ಬಗ್ಗೆ ಓದುತ್ತಿರುವಾಗ ನಮಗೆ ಆ ಬೆಂಗಳೂರಿನ ಚಿತ್ರಣ ಮೂಡಿ ಬಂದು ನಾವು ಆಗಿನ ಬೆಂಗಳೂರಿಗನಾಗಿದ್ದರೆ ಎಷ್ಟು ಸೊಗಸು ಅಂತ ಅನಿಸಬಹುದೇನೊ? ಕಥಾವಸ್ತು ಬೆಂಗಳೂರಿಂದ ಶುರುವಾಗಿ ದೂರದ ಜರ್ಮನಿ, ಆಮ್ಸ್‌ಟರ್‌ಡ್ಯಾಮ್, ಇಸ್ರೇಲ್ ಹಾಗೂ ಅಮೆರಿಕವೆಲ್ಲ ಸುತ್ತು ಹೊಡೆಯುತ್ತದೆ, ಎಲ್ಲಿಯೂ ಸಹ ಕಥೆ ಚಿಟ್ಟು ಹಿಡಿಸದು. ಇಡೀ ಕಾದಂಬರಿಯಲ್ಲಿ ನನಗೆ ತುಂಬಾ ಹಿಡಿಸಿದ ಪಾತ್ರ ವಿವೇಕನ ತಾಯಿ ಹಾಗೂ ನಾಜ಼ಿಗಳ ಅಟ್ಟಹಾಸವನ್ನ ಎದುರಿಸಿದ ರೆಬೆಕ್ಕಾ ಮೋಸೆಸ್ ಪಾತ್ರ, ಆ ಪಾತ್ರ ತನ್ನ ಕಷ್ಟ ಕೋಟಲೆಗಳನ್ನ ವಿವರಿಸುವಾಗ ನನಗರಿಯದಂತೆ ಭಾವುಕನಾದೆ ಕೆಲ ನಿಮಿಷ ಓದಲು ಸಾಧ್ಯವಾಗಲಿಲ್ಲ...
  ಇದು ಈ ಕಾದಂಬರಿಯ ತಾಕತ್ತು.

 6. says:

  Abba ! Such an amazing book ! .. It gave me rattling thoughts for about a week on times Nazi Concentration camps. Opens up dark reality of Germany, Hitler .. it leaves u with single thought- How the whole Germany and other countries remained dumb viewers of all cruelty !

  More sad part is, world has accepted Hitler as role model, and I hear young people saying I like Hitler. Irony is Daemon can become angel over period of time with tweak in the history and by exaggerating only few good things about "the daemon."

  Really a must read for all Kannadiga book lovers.
  Please read this book !


 7. says:

  ಈ ಕಾದಂಬರಿಯ ಕಥೆ ಕಾಲ್ಪನಿಕವಾಗಿದ್ದರೂ ಇದು ಹಲವಾರು ಯಹೂದಿಗಳ ನಿಜ ಜೀವನದ ತುಣುಕುಗಳಿಂದ ಕೂಡಿದ್ದಾಗಿದೆ. ಸಾವಿರ ಸಾವಿರ ಸಾವುಗಳ ಮಾಹಿತಿ ಓದಿದಾಗ ಅದು ಅಂಕಿಅಂಶವಾಗಿ ಮಾತ್ರ ಉಳಿಯುತ್ತದೆ. ಆದರೆ ಅದನ್ನು ಓರ್ವ ವ್ಯಕ್ತಿಯ ಕಥೆಯಾಗಿ ನಮ್ಮ ಮುಂದೆ ಇಟ್ಟಲ್ಲಿ ಅದು ನಮ್ಮ ಮನದಲ್ಲಿ ಮಾಡುವ ಪರಿಣಾಮ ಹೆಚ್ಚು ಘನವಾದದ್ದೇ ಆಗಿರುತ್ತದೆ.

  ಈ ಹೊತ್ತಿಗೆಗಾಗಿ ಲೇಖಕಿ ನೇಮಿಚಂದ್ರ ಅವರು ಪಟ್ಟಿರುವ ಪರಿಶ್ರಮ, ಮಾಡಿರುವ ಅಧ್ಯಯನ, ನೋಡಿ ಬಂದ ಸ್ಥಗಳು ಅಷ್ಟಿಷ್ಟಲ್ಲ. ಎಲ್ಲಿಯೂ ಬೇಸರವಾಗದಂತೆ ಕಥೆಯನ್ನು ಹೆಣೆದು ಇತಿಹಾಸದ ತುಣುಕುಗಳನ್ನು ಅಲ್ಲಲ್ಲಿ ಚೆಲ್ಲಿ ಒಂದು ರೋಚಕ ಕಥನವನ್ನು ಕೊಟ್ಟಿದ್ದಾರೆ.

 8. says:

  Worth reading.

 9. says:

  Yad vashem

 10. says:

  Sometimes u read and you tend to forget but sometimes without your knowledge you absorb and proliferate.. This book wasn't just a read... It was an unforgettable journey 🖤

Leave a Reply

Your email address will not be published. Required fields are marked *